Tuesday 3 May 2011

ನೆನಪಿನಂಗಳದಲಿ......

ನಾವು ಕೋಲಾರಕ್ಕೆ ಎರಡು  ದಿನಗಳ ಕಾಲ ಪ್ರವಾಸ ಮಾಡಿದ್ವಿ .. ತುಂಬಾನೇ  ಚೆನ್ನಾಗಿತ್ತು .. ಒಂದೂಂದು ಕ್ಷಣ ಕೂಡ ಮರೆಯಲಾಗದ ಸಿಹಿ ಸಂಪತ್ತು... ಸ್ನೇಹಿತರೊಂದಿಗೆ ಕಳೆದ  ಆ ಸಮಯಗಳು  ಈಗ ನೆನಪಿನಂಗಳದಲಿ ಚಿಮ್ಮುತಿವೆ ...
ಆವನಿ ಬೆಟ್ಟಕ್ಕೆ ಹತ್ತಿದ್ದು ಬಹಳ ಚೆನ್ನಾಗಿತ್ತು ... ಅಲ್ಲಿ ಸೀತಾ ಮಾತೆ  ತಂಗಿದ್ದ ಸ್ಥಳಗಳು, ಇತಿಹಾಸದ ಪುಟಗಳನ್ನು ನೆನಪಿಸುವ 
ವಿಜಯನಗರ ಸಾಮ್ರಾಜ್ಯದ ಮತ್ತು ಚೋಳರ ಕಾಲದ ದೇಗುಲಗಳ ವೈಭವದ ಶಿಲ್ಪಕಲೆಗಳು  ಕಣ್ಣು  ಮಿಟಿಕಿಸುವಂತಿತ್ತು...!!!
ಬಂಗಾರಪೇಟೆದಿಂದ  ಸ್ವಲ್ಪ ದೂರದಲ್ಲಿರುವ ಕೋಟಿ ಲಿಂಗ ಒಂದು ಅದ್ಭುತ ಶಿವನ ಕ್ಷೇತ್ರ ... ಅಲ್ಲಿ ಸುಮಾರು  ೯೦ ಲಕ್ಷಕ್ಕೂ ಅಧಿಕ ಲಿಂಗಗಳು  ಸ್ಥಾಪಿಸಲ್ಪಟ್ಟಿವೆ... 
   ಅಂತರಗಂಗೆ  ಎಂಬುದು ಕೋಲಾರದಲ್ಲಿರುವ ಪ್ರವಾಸಿ ಸ್ಥಳ.. ಇಲ್ಲಿರುವ ಬೆಟ್ಟದಲ್ಲಿ ಅಂತರಗಂಗೆಯು ಜಲರೂಪಿಯಾಗಿ ಚಿಮ್ಮುವಳು ... 
ತಿರುಪತಿ ಮತ್ತು ಶ್ರೀ ಕಾಳಹಸ್ತಿ  ದೇವಾಲಯಗಳ ದರುಶನ ಮಾಡಿದೆವು ....